17ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.
18ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ ಕಠಿಣ ವಾಗಿ ಮಾತನಾಡುವ ಸುಳ್ಳಿನ ತುಟಿಗಳು ಮೌನ ವಾಗಲಿ.
19ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
20ಅವರನ್ನು ನಿನ್ನ ಸನ್ನಿಧಾನದ ಮರೆಯಲ್ಲಿ ಮನು ಷ್ಯರ ಗರ್ವಕ್ಕೆ ನೀನು ಮರೆಮಾಡುತ್ತೀ; ನಾಲಿಗೆಗಳ ವಿವಾದಕ್ಕೆ ಡೇರೆಯಲ್ಲಿ ಗುಪ್ತವಾಗಿ ಅವರನ್ನು ಕಾಪಾ ಡುವಿ.
21ಆತನು ಭದ್ರವಾದ ಪಟ್ಟಣದಲ್ಲಿ ತನ್ನ ಆಶ್ಚ ರ್ಯವಾದ ಕರುಣೆ ನನಗೆ ತೋರಿಸಿದ್ದಾನೆ ಕರ್ತ ನಿಗೆ ಸ್ತೋತ್ರ.