ಸ್ತುತಿಗಳು 33

ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ.

Psalm 33:3 (UKJV) Sing unto him a new song; play skillfully with a loud noise.

1ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ.

2ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ.

3ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ.

4ಕರ್ತನ ವಾಕ್ಯವು ಯಥಾರ್ಥವಾದದ್ದು. ಆತನ ಕೆಲಸಗಳೆಲ್ಲಾ ಸತ್ಯದಲ್ಲಿ ಮಾಡಲ್ಪಟ್ಟಿವೆ.

5ಆತನು ನೀತಿ ನ್ಯಾಯಗಳನ್ನು ಪ್ರೀತಿಮಾಡುತ್ತಾನೆ; ಭೂಮಿ ಎಲ್ಲಾ ಕರ್ತನ ಒಳ್ಳೇತನದಿಂದ ತುಂಬಿದೆ.

Kannada Bible (Old Version), Bible Society of India.