11ನನ್ನ ಪ್ರಿಯರೂ ಸ್ನೇಹಿತರೂ ನನ್ನ ಹುಣ್ಣನ್ನು ನೋಡಿ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.
12ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
13ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳಲಿಲ್ಲ; ತನ್ನ ಬಾಯನ್ನು ತೆರೆಯದ ಮೂಕನ ಹಾಗೆ ನಾನಿದ್ದೆನು.
14ನಾನು ಕಿವಿ ಕೇಳಿಸದವನಂತೆಯೂ ಪ್ರತ್ತ್ಯುತ್ತರ ಕೊಡಲಾರದವನಂತೆಯೂ ಆದೆನು.
15ಓ ಕರ್ತನೇ, ನಿನ್ನನ್ನು ನಿರೀಕ್ಷಿಸುತ್ತೇನೆ; ನನ್ನ ದೇವರಾದ ಓ ಕರ್ತನೇ, ನೀನು ಉತ್ತರ ಕೊಡುವಿ.