1ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು.
2ಮೋಸ ಮಾಡುವ ಹದವಾದ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡುಗಳನ್ನು ಕಲ್ಪಿಸುತ್ತದೆ.
3ಒಳ್ಳೇದಕ್ಕಿಂತ ಕೆಟ್ಟದ್ದನ್ನೂ ನೀತಿಯನ್ನು ಮಾತನಾಡುವದಕ್ಕಿಂತ ಸುಳ್ಳನ್ನೂ ಪ್ರೀತಿ ಮಾಡುತ್ತೀ ಸೆಲಾ.
4ಓ ಮೋಸದ ನಾಲಿಗೆಯೇ, ನೀನು ನುಂಗಿಬಿಡುವ ಮಾತುಗಳನ್ನೆಲ್ಲಾ ಪ್ರೀತಿ ಮಾಡುತ್ತೀ.
5ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.