ಸ್ತುತಿಗಳು 60

ನಿನ್ನ ಜನರಿಗೆ ಕಠಿಣವಾದವುಗಳನ್ನು ನೀನು ತೋರಿಸಿದ್ದೀ; ವಿಸ್ಮಯದ ದ್ರಾಕ್ಷಾರಸವನ್ನು ನಮಗೆ ಕುಡಿಸಿದ್ದೀ.

Psalm 60:3 (UKJV) You have showed your people hard things: you have made us to drink the wine of astonishment.

1ಓ ದೇವರೇ, ಕೋಪಿಸಿಕೊಂಡು ನಮ್ಮನ್ನು ತಳ್ಳಿ ಚದರಿಸಿಬಿಟ್ಟಿದ್ದೀ; ಮತ್ತೆ ನಮ್ಮ ಕಡೆಗೆ ತಿರುಗಿಕೋ.

2ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿದ್ದೀ; ಅದರ ಬಿರುಕುಗಳನ್ನು ಸರಿಮಾಡು; ಅದು ಕದಲು ತ್ತದೆ.

3ನಿನ್ನ ಜನರಿಗೆ ಕಠಿಣವಾದವುಗಳನ್ನು ನೀನು ತೋರಿಸಿದ್ದೀ; ವಿಸ್ಮಯದ ದ್ರಾಕ್ಷಾರಸವನ್ನು ನಮಗೆ ಕುಡಿಸಿದ್ದೀ.

4ಸತ್ಯದ ನಿಮಿತ್ತ ಧ್ವಜವು ಎತ್ತಲ್ಪಡುವಂತೆ ನಿನಗೆ ಭಯಪಡುವವರಿಗೆ ನೀನು ಅದನ್ನು ಕೊಟ್ಟಿದ್ದೀ. ಸೆಲಾ.

5ನಿನ್ನ ಪ್ರಿಯರು ಬಿಡುಗಡೆ ಯಾಗುವಂತೆ ನನ್ನ ಪ್ರಾರ್ಥನೆಯನ್ನು ಕೇಳಿ ನಿನ್ನ ಬಲಗೈಯಿಂದ ರಕ್ಷಿಸು.

Kannada Bible (Old Version), Bible Society of India.