4ಅವರು ಅವ ನನ್ನು ಉನ್ನತಸ್ಥಾನದಿಂದ ದೊಬ್ಬುವದನ್ನೇ ಆಲೋಚಿ ಸುತ್ತಾರೆ; ಅವರು ಸುಳ್ಳುಗಳಲ್ಲಿ ಇಷ್ಟ ಪಡುತ್ತಾರೆ. ಅವರು ತಮ್ಮ ಬಾಯಿಂದ ಆಶೀರ್ವದಿಸಿ ಅಂತರಂಗ ದಲ್ಲಿ ಶಪಿಸುತ್ತಾರೆ. ಸೆಲಾ.
5ನನ್ನ ಪ್ರಾಣವೇ, ದೇವರಿಗಾಗಿ ಮಾತ್ರ ಕಾದಿರು; ನನ್ನ ನಿರೀಕ್ಷೆಯು ಆತನಿಂದಲೇ.
6ಆತನೇ ನನ್ನ ಬಂಡೆಯೂ ರಕ್ಷಣೆಯೂ ದುರ್ಗವೂ ಆಗಿದ್ದಾನೆ. ನಾನು ಕದಲೆನು.
7ದೇವರಲ್ಲಿಯೇ ನನ್ನ ರಕ್ಷಣೆಯೂ ಘನವೂ ಇದೆ; ನನ್ನ ಬಲದ ಬಂಡೆಯೂ ನನ್ನ ಆಶ್ರಯವೂ ದೇವರಲ್ಲಿಯೇ.
8ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.