19ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು,ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ. ಸೆಲಾ.
20ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾನೆ; ನಮ್ಮ ಕರ್ತನಾದ ದೇವರು ಮರಣದಿಂದ ತಪ್ಪಿಸಲು ಶಕ್ತನಾಗಿದ್ದಾನೆ.
21ದೇವರು ತನ್ನ ಶತ್ರುಗಳ ತಲೆ ಯನ್ನೂ ತನ್ನ ಅಪರಾಧಗಳಲ್ಲಿ ಮುಂದುವರಿಯುವ ತುಂಬು ಗೂದಲಿನ ತಲೆಯನ್ನೂ ಗಾಯಪಡಿಸುತ್ತಾನೆ.
22ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.
23ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.