ಪ್ರಕಟನೆ 3

ನೀನು ನನ್ನ ಸಹನ ವಾಕ್ಯವನ್ನು ಕಾಪಾಡಿದ್ದರಿಂದ ಭೂಮಿಯ ಮೇಲೆ ವಾಸ ಮಾಡುವವ ರನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರು ವದಕ್ಕಿರುವ ಶೋಧನೆಯ ಸಮಯದಿಂದ ನಾನು ಸಹ ನಿನ್ನನ್ನು ಕಾಪಾಡುವೆನು.

Revelation 3:10 (UKJV) Because you have kept the word of my patience, I also will keep you from the hour of temptation, which shall come upon all the world, to try them that dwell upon the earth.

8ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ಇಗೋ, ನಾನು ನಿನ್ನ ಮುಂದೆ ಒಂದು ಬಾಗಲನ್ನು ತೆರೆದಿದ್ದೇನೆ, ಅದನ್ನು ಯಾವ ಮನುಷ್ಯನೂ ಮುಚ್ಚಲಾರನು; ಯಾಕಂದರೆ ನಿನ್ನ ಶಕ್ತಿ ಕೊಂಚವಾಗಿದ್ದರೂ ನನ್ನ ವಾಕ್ಯವನ್ನು ಕಾಪಾಡಿ ನನ್ನ ಹೆಸರನ್ನು ಅಲ್ಲಗಳೆಯಲಿಲ್ಲ.

9ಇಗೋ, ಯೆಹೂದ್ಯ ರಲ್ಲದವರಾಗಿದ್ದರೂ ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದವರನ್ನು ಬರಮಾಡಿ, ಇಗೋ, ಅವರನ್ನು ನಿನ್ನ ಪಾದಗಳ ಮುಂದೆ ಆರಾಧಿಸುವಂತೆ ಮಾಡುವೆನು, ಇದರಿಂದ ನಾನು ನಿನ್ನನ್ನು ಪ್ರೀತಿಸಿದ್ದೇನೆಂದು ಅವರು ತಿಳುಕೊಳ್ಳುವಂತೆ ಮಾಡು

10ನೀನು ನನ್ನ ಸಹನ ವಾಕ್ಯವನ್ನು ಕಾಪಾಡಿದ್ದರಿಂದ ಭೂಮಿಯ ಮೇಲೆ ವಾಸ ಮಾಡುವವ ರನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರು ವದಕ್ಕಿರುವ ಶೋಧನೆಯ ಸಮಯದಿಂದ ನಾನು ಸಹ ನಿನ್ನನ್ನು ಕಾಪಾಡುವೆನು.

11ಇಗೋ, ನಾನು ಬೇಗನೆ ಬರುತ್ತೇನೆ; ನಿನ್ನ ಕಿರೀಟವನ್ನು ಯಾರೂ ಅಪಹರಿಸ ದಂತೆ ನಿನಗಿರುವದನ್ನು ಬಿಗಿಯಾಗಿ ಹಿಡಿದುಕೊಂಡಿರು;

12ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನೂ ಪರಲೋಕದಲ್ಲಿರುವ ನನ್ನ ದೇವರ ಬಳಿಯಿಂದ ಇಳಿದು ಬರುವ ಹೊಸ ಯೆರೂಸಲೇಮ್‌ ಎಂಬ

Kannada Bible (Old Version), Bible Society of India.