ಪ್ರಕಟನೆ 5

ಇದಲ್ಲದೆ ಬಲಿಷ್ಠನಾದ ಒಬ್ಬ ದೂತನು--ಈ ಪುಸ್ತಕವನ್ನು ತೆರೆಯುವದಕ್ಕೂ ಇದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯಾವನು ಯೋಗ್ಯನು ಎಂದು ಮಹಾಶಬ್ದದಿಂದ ಸಾರುವದನ್ನು ಕಂಡೆನು.

Revelation 5:2 (UKJV) And I saw a strong angel proclaiming with a loud voice, Who is worthy to open the book, and to loose the seals thereof?

1ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯಲ್ಲಿ ಒಂದು ಪುಸ್ತಕವನ್ನು ಕಂಡೆನು; ಅದರ ಒಳಗೂ ಹಿಂದಿನ ಭಾಗದ ಮೇಲೆಯೂ ಬರೆದಿತ್ತು; ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.

2ಇದಲ್ಲದೆ ಬಲಿಷ್ಠನಾದ ಒಬ್ಬ ದೂತನು--ಈ ಪುಸ್ತಕವನ್ನು ತೆರೆಯುವದಕ್ಕೂ ಇದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯಾವನು ಯೋಗ್ಯನು ಎಂದು ಮಹಾಶಬ್ದದಿಂದ ಸಾರುವದನ್ನು ಕಂಡೆನು.

3ಆ ಪುಸ್ತಕವನ್ನು ತೆರೆಯುವದಕ್ಕಾದರೂ ಅದರೊಳಗೆ ನೋಡುವದಕ್ಕಾದರೂ ಪರಲೋಕದಲ್ಲಿಯಾಗಲಿ ಭೂಮಿಯಲ್ಲಿಯಾಗಲಿ ಭೂಮಿಯ ಕೆಳಗಾಗಲಿ ಯಾವನಿಗೂ ಶಕ್ತಿಯಿರಲಿಲ್ಲ.

4ಆಗ ಪುಸ್ತಕವನ್ನು ತೆರೆಯುವದಕ್ಕಾಗಲಿ ಅದನ್ನು ಓದುವದಕ್ಕಾಗಲಿ ಅದರಲ್ಲಿ ನೋಡುವದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅತ್ತೆನು.

Kannada Bible (Old Version), Bible Society of India.