ಪ್ರಕಟನೆ 9

ಐದನೆಯ ದೂತನು ಊದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ತಳವಿಲ್ಲದ ತಗ್ಗಿನ ಬೀಗದ ಕೈ ಕೊಡಲ್ಪಟ್ಟಿತು.

Revelation 9:1 (UKJV) And the fifth angel sounded, and I saw a star fall from heaven unto the earth: and to him was given the key of the bottomless pit.

1ಐದನೆಯ ದೂತನು ಊದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ತಳವಿಲ್ಲದ ತಗ್ಗಿನ ಬೀಗದ ಕೈ ಕೊಡಲ್ಪಟ್ಟಿತು.

2ಅವನು ಆ ತಳವಿಲ್ಲದ ತಗ್ಗನ್ನು ತೆರೆದಾಗ ಅಲ್ಲಿಂದ ದೊಡ್ಡ ಕುಲುಮೆಯ ಹೊಗೆಯಂತೆ ಆ ತಗ್ಗಿನೊಳಗಿಂದ ಹೊಗೆಯು ಏರಿತು; ಆ ತಗ್ಗಿನ ಹೊಗೆಯ ದೆಸೆಯಿಂದ ಸೂರ್ಯನು ವಾಯು ಮಂಡಲವು ಕತ್ತಲಾದವು.

3ಹೊಗೆಯೊಳಗಿಂದ ಮಿಡಿತೆಗಳು ಭೂಮಿಯ ಮೇಲೆ ಹೊರಟು ಬಂದವು. ಭೂಮಿಯಲ್ಲಿರುವ ಚೇಳುಗಳಿಗೆ ಬಲವಿರುವ ಪ್ರಕಾರ ಅವುಗಳಿಗೆ ಬಲವು ಕೊಡಲ್ಪಟ್ಟಿತು.

Kannada Bible (Old Version), Bible Society of India.