ರೂತು 4

ಬೋವಜನು ಪಟ್ಟಣದ ಬಾಗಲಲ್ಲಿ ಹೋಗಿ ಕುಳಿತಿರುವಾಗ ಇಗೋ, ಬೋವಜನು ಹೇಳಿದ್ದ ಆ ಸಂಬಂಧಿಕನು ಹಾದು ಹೋಗುತ್ತಿದ್ದನು. ಆಗ ಅವನು ಓ ಮನುಷ್ಯನೇ, ಈ ಕಡೆಗೆ ಬಂದು ಇಲ್ಲಿ ಕೂತುಕೋ ಅಂದನು. ಅವನು ಬಂದು ಕೂತುಕೊಂಡನು.

Ruth 4:1 (UKJV) Then went Boaz up to the gate, and sat him down there: and, behold, the kinsman of whom Boaz spoke came by; unto whom he said, Ho, such a one! turn aside, sit down here. And he turned aside, and sat down.

1ಬೋವಜನು ಪಟ್ಟಣದ ಬಾಗಲಲ್ಲಿ ಹೋಗಿ ಕುಳಿತಿರುವಾಗ ಇಗೋ, ಬೋವಜನು ಹೇಳಿದ್ದ ಆ ಸಂಬಂಧಿಕನು ಹಾದು ಹೋಗುತ್ತಿದ್ದನು. ಆಗ ಅವನು ಓ ಮನುಷ್ಯನೇ, ಈ ಕಡೆಗೆ ಬಂದು ಇಲ್ಲಿ ಕೂತುಕೋ ಅಂದನು. ಅವನು ಬಂದು ಕೂತುಕೊಂಡನು.

2ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿ ಯನ್ನು ಕರೆದು ಅವರಿಗೆ ಇಲ್ಲಿ ಕುಳಿತುಕೊಳ್ಳಿರಿ ಅಂದನು. ಅವರು ಕುಳಿತರು.

3ಆಗ ಅವನು ಆ ಬಂಧುವಿಗೆ ಹೇಳಿದ್ದೇನಂದರೆ ಮೋವಾಬ್‌ ಸೀಮೆ ಯಿಂದ ತಿರಿಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿ ಬಿಡಬೇಕೆಂದಿರುತ್ತಾಳೆ.

Kannada Bible (Old Version), Bible Society of India.