ಪರಮಗೀತಗಳು 2

ಔತಣದ ಮನೆಗೆ ನನ್ನನ್ನು ಕರಕೊಂಡು ಬಂದನು; ನನ್ನ ಮೇಲೆ ಅವನ ಧ್ವಜ ಪ್ರೀತಿಯೇ.

Song of Solomon 2:4 (UKJV) He brought me to the banqueting house, and his banner over me was love.

2ಮುಳ್ಳುಗಳಲ್ಲಿ ತಾವರೆಯು ಹೇಗೋ ನನ್ನ ಪ್ರಿಯಳು ಕುಮಾರ್ತೆ ಗಳಲ್ಲಿ ಹಾಗೆಯೇ ಇದ್ದಾಳೆ.

3ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು.

4ಔತಣದ ಮನೆಗೆ ನನ್ನನ್ನು ಕರಕೊಂಡು ಬಂದನು; ನನ್ನ ಮೇಲೆ ಅವನ ಧ್ವಜ ಪ್ರೀತಿಯೇ.

5ದ್ರಾಕ್ಷೆಯ ಉಂಡಿಗಳಿಂದ ನನ್ನನ್ನು ಹಿಡಿದಿರು; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸು; ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.

6ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ.

Kannada Bible (Old Version), Bible Society of India.