ಪರಮಗೀತಗಳು 3

ನಾನು ಅವರನ್ನು ಬಿಟ್ಟು ಸ್ವಲ್ಪ ಆಚೆಗೆ ಹೋದ ತರುವಾಯ, ನನ್ನ ಪ್ರಾಣಪ್ರಿಯನನ್ನು ಕಂಡೆನು. ನಾನು ಅವನನ್ನು ಹಿಡುಕೊಂಡು ನನ್ನ ತಾಯಿಯ ಮನೆಗೂ ನನ್ನನ್ನು ಹೆತ್ತವಳ ಕೊಠಡಿಗೂ ಅವನನ್ನು ಕರತರುವ ವರೆಗೆ ಹೋಗಗೊಡಿಸಲಿಲ್ಲ.

Song of Solomon 3:4 (UKJV) It was but a little that I passed from them, but I found him whom my soul loves: I held him, and would not let him go, until I had brought him into my mother's house, and into the chamber of her that conceived me.

2ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು.

3ಪಟ್ಟಣವನ್ನು ಸಂಚರಿಸುವ ಕಾವಲು ಗಾರರು ನನ್ನನ್ನು ಕಂಡಾಗ--ನನ್ನ ಪ್ರಾಣಪ್ರಿಯ ನನ್ನು ನೀವು ಕಂಡಿರಾ ಅಂದೆನು.

4ನಾನು ಅವರನ್ನು ಬಿಟ್ಟು ಸ್ವಲ್ಪ ಆಚೆಗೆ ಹೋದ ತರುವಾಯ, ನನ್ನ ಪ್ರಾಣಪ್ರಿಯನನ್ನು ಕಂಡೆನು. ನಾನು ಅವನನ್ನು ಹಿಡುಕೊಂಡು ನನ್ನ ತಾಯಿಯ ಮನೆಗೂ ನನ್ನನ್ನು ಹೆತ್ತವಳ ಕೊಠಡಿಗೂ ಅವನನ್ನು ಕರತರುವ ವರೆಗೆ ಹೋಗಗೊಡಿಸಲಿಲ್ಲ.

5ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ನನ್ನ ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಬೇಡಿರಿ ಎಂದು ಅಡವಿಯ ಜಿಂಕೆಗಳಿಂದಲೂ ದುಪ್ಪಿಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.

6ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?

Kannada Bible (Old Version), Bible Society of India.