ಜೆಕರ್ಯ 5

ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.

Zechariah 5:9 (UKJV) Then lifted I up mine eyes, and looked, and, behold, there came out two women, and the wind was in their wings; for they had wings like the wings of a stork: and they lifted up the ephah between the earth and the heaven.

7ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು

8ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು.

9ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.

10ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ--ಇವರು ಎಫವನ್ನು ಎಲ್ಲಿಗೆ ಹೊತ್ತು ಕ್ಕೊಂಡು ಹೋಗುತ್ತಾರೆ ಅಂದೆನು.

11ಅವನು ನನಗೆ --ಶಿನಾರ್‌ ದೇಶದಲ್ಲಿ ಅದಕ್ಕೆ ಮನೆ ಕಟ್ಟುವದಕ್ಕಾಗಿ ತಕ್ಕೊಂಡು ಹೋಗುತ್ತಾರೆ; ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ಥಾನದಲ್ಲಿ ಇರಿಸಲ್ಪಡುವದು ಅಂದನು.

Kannada Bible (Old Version), Bible Society of India.