20ಅವನು ಚಿಕ್ಲಗಿಗೆ ಹೋಗುತ್ತಿರು ವಾಗ ಮನಸ್ಸೆಯವರಾದಂಥ, ಮನಸ್ಸೆಯ ಸಹಸ್ರಗಳ ಮೇಲೆ ಅಧಿಪತಿಗಳಾದಂಥ ಅದ್ನನೂ ಯೊಜಾ ಬಾದನೂ ಎದೀಗಯೇಲನೂ ವಿಾಕಾಯೇಲನೂ ಯೋಜಾಬಾದನೂ ಎಲೀಹೂವೂ ಚಿಲ್ಲೆತೈಯೂ ಅವನ ಕಡೆಗೆ ಸೇರಿಕೊಂಡರು.
21ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು.
22ಅದೇ ಕಾಲದಲ್ಲಿ ಪ್ರತಿದಿನ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವ ವರೆಗೆ ದಾವೀದನಿಗೆ ಸಹಾಯ ಮಾಡುವದಕ್ಕೆ ಅವನ ಕಡೆಗೆ ಬರುತ್ತಿದ್ದರು.
23ಕರ್ತನ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವದಕ್ಕೆ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿ ಕೊಂಡು ಬಂದ ದಂಡುಗಳ ಲೆಕ್ಕವೇನಂದರೆ --
24ಖೇಡ್ಯವನ್ನೂ ಭಲ್ಲೆಯನ್ನೂ ಹಿಡುಕೊಂಡು ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು ಆರು ಸಾವಿರದ ಎಂಟುನೂರು ಮಂದಿ.