11ಎರಡನೆಯವನು ಹಿಲ್ಕೀಯನು, ಮೂರನೆಯವನು ಟೆಬಲ್ಯನು, ನಾಲ್ಕನೆ ಯವನು ಜೆಕರ್ಯನು; ಹೋಸನ ಸಮಸ್ತ ಕುಮಾರರೂ ಹದಿಮೂರು ಮಂದಿಯಾಗಿದ್ದರು.
12ಇದರಲ್ಲಿ ದ್ವಾರಪಾಲಕರ ವರ್ಗಗಳು ಕರ್ತನ ಮನೆಯಲ್ಲಿ ಸೇವಿಸುವದಕ್ಕೆ ವರ್ಗವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲ್ಪಟ್ಟಿದ್ದವು.
13ಅವರು ಕಿರಿ ಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಲು ಬಾಗಲುಗಳಿಗೂ ಚೀಟುಗಳನ್ನು ಹಾಕಿದರು.
14ಮೂಡಣ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗನೂ ಬುದ್ಧಿಯುಳ್ಳ ಆಲೋಚನೆ ಯುಳ್ಳವನಾಗಿರುವ ಜೆಕರ್ಯನಿಗೋಸ್ಕರ ಚೀಟುಗ ಳನ್ನು ಹಾಕಿದರು; ಅವನ ಚೀಟು ಉತ್ತರ ಭಾಗಕ್ಕೆ ಬಿತ್ತು.
15ಒಬೇದೆದೋಮನಿಗೆ ದಕ್ಷಿಣ ಭಾಗಕ್ಕೆ ಬಿತ್ತು. ಅವನ ಕುಮಾರರಿಗೆ ಶುಪ್ಪೀಮ್ ಎಂಬ ಮನೆ ಬಂತು.