1 ಕೊರಿಂಥ 10

ಅನೇಕರಾದ ನಾವು ಒಂದೇರೊಟ್ಟಿಯೂ ಒಂದೇದೇಹವೂ ಆಗಿದ್ದೇವೆ; ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುಗಾರರಾಗಿದ್ದೇವೆ.

1 Corinthians 10:17 (UKJV) For we being many are one bread, and one body: for we are all partakers of that one bread.

15ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ; ನಾನು ಹೇಳುವ ದನ್ನು ನೀವೇ ಯೋಚಿಸಿರಿ.

16ನಾವು ಸ್ತೋತ್ರಸಲ್ಲಿಸುವ ಸ್ತೋತ್ರದ ಪಾತ್ರೆಯು ಕ್ರಿಸ್ತನ ರಕ್ತದ ಅನ್ಯೋನ್ಯತೆ ಯಲ್ಲವೋ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದ ಅನ್ಯೋನ್ಯತೆಯಲ್ಲವೋ?

17ಅನೇಕರಾದ ನಾವು ಒಂದೇರೊಟ್ಟಿಯೂ ಒಂದೇದೇಹವೂ ಆಗಿದ್ದೇವೆ; ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುಗಾರರಾಗಿದ್ದೇವೆ.

18ಶರೀರದ ಪ್ರಕಾರ ಇಸ್ರಾಯೇಲ್ಯರನ್ನು ನೋಡಿರಿ; ಯಜ್ಞ ಮಾಡಿದವು ಗಳನ್ನು ತಿನ್ನುವವರು ಯಜ್ಞವೇದಿಯೊಂದಿಗೆ ಪಾಲು ಗಾರರಾಗಿದ್ದಾರಲ್ಲವೇ?

19ಹಾಗಾದರೆ ನಾನು ಏನು ಹೇಳಲಿ? ವಿಗ್ರಹವು ಏನಾದರೂ ವಿಶೇಷವೋ? ಇಲ್ಲವೆ ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ್ದು ಏನಾದರೂ ವಿಶೇಷವೋ?

Kannada Bible (Old Version), Bible Society of India.