1 ಕೊರಿಂಥ 16

ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷ ವಾಯಿತು. ನೀವು ಇಲ್ಲದ್ದರಿಂದ ಉಂಟಾದ ಕೊರತೆ ಯನ್ನು ಅವರು ನೀಗಿಸಿದರು.

1 Corinthians 16:17 (UKJV) I am glad of the coming of Stephanas and Fortunatus and Achaicus: for that which was lacking on your part they have supplied.

15ಸ್ತೆಫನನ ಮನೆಯವರು ಅಕಾಯದ ಪ್ರಥಮ ಫಲವೆಂದೂ ಅವರು ಪರಿಶುದ್ಧರ ಸೇವೆಯಲ್ಲಿ ತಮ್ಮನ್ನು ಒಪ್ಪಿಸಿಕೊಟ್ಟಿದ್ದರೆಂದೂ ನಿಮಗೆ ತಿಳಿದದೆ.

16ಆದದರಿಂದ ಅಂಥವರಿಗೂ ನಮ್ಮೊಂದಿಗೆ ಸಹಾಯ ಮಾಡುತ್ತಾ ಪ್ರಯಾಸಪಡುವ ಪ್ರತಿಯೊಬ್ಬನಿಗೂ ನೀವು ಅಧೀನರಾಗಬೇಕೆಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.

17ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷ ವಾಯಿತು. ನೀವು ಇಲ್ಲದ್ದರಿಂದ ಉಂಟಾದ ಕೊರತೆ ಯನ್ನು ಅವರು ನೀಗಿಸಿದರು.

18ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ.

19ಆಸ್ಯ ಸಭೆಗಳವರು ನಿಮಗೆ ವಂದನೆ ಹೇಳುತ್ತಾರೆ. ಅಕ್ವಿಲನೂ ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನಲ್ಲಿ ಅನೇಕ ವಂದನೆಗಳನ್ನು ಹೇಳುತ್ತಾರೆ.

Kannada Bible (Old Version), Bible Society of India.