1 ರಾಜರು 17

ಕರ್ತನು ಎಲೀಯನ ಸ್ವರವನ್ನು ಕೇಳಿದ್ದರಿಂದ ಹುಡುಗನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರಿಗಿ ಬಂತು.

1 Kings 17:22 (UKJV) And the LORD heard the voice of Elijah; and the soul of the child came into him again, and he revived.

20ತನ್ನ ಮಂಚದ ಮೇಲೆ ಮಲಗಿಸಿ--ನನ್ನ ದೇವರಾದ ಕರ್ತನೇ, ನಾನು ವಾಸವಾಗಿರುವ ವಿಧವೆಯ ಮಗನನ್ನು ಕೊಂದು ಹಾಕುವ ಈ ಕೇಡನ್ನು ಅವಳ ಮೇಲೆ ಬರಮಾಡಿದಿಯಲ್ಲಾ ಎಂದು ಕರ್ತನನ್ನು ಕೂಗಿ ಬೇಡಿದನು.

21ಆಗ ಅವನು ಹುಡುಗನ ಮೇಲೆ ಮೂರು ಸಾರಿ ಬೋರ್ಲ ಬಿದ್ದುನನ್ನ ದೇವರಾದ ಓ ಕರ್ತನೇ, ಈ ಹುಡುಗನ ಪ್ರಾಣ ಅವನಲ್ಲಿ ತಿರಿಗಿ ಬರಲಿ ಎಂದು ಕರ್ತನನ್ನು ಕೂಗಿದನು.

22ಕರ್ತನು ಎಲೀಯನ ಸ್ವರವನ್ನು ಕೇಳಿದ್ದರಿಂದ ಹುಡುಗನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರಿಗಿ ಬಂತು.

23ಆಗ ಎಲೀಯನು ಹುಡುಗನನ್ನು ಎತ್ತಿಕೊಂಡು ಉಪ್ಪರಿಗೆ ಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು ಅವನನ್ನು ಅವನ ತಾಯಿಗೆ ಕೊಟ್ಟನು. ಅವನುನೋಡು, ನಿನ್ನ ಮಗನು ಜೀವದಿಂದಿದ್ದಾನೆಂದು ಎಲೀ ಯನು ಹೇಳಿದನು.

24ಆಗ ಸ್ತ್ರೀಯು ಎಲೀಯನಿಗೆನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಯ ಲ್ಲಿರುವ ಕರ್ತನ ವಾಕ್ಯವು ನಿಜವೆಂದೂ ಇದರಿಂದ ಈಗ ತಿಳಿದಿದ್ದೇನೆ ಅಂದಳು.

Kannada Bible (Old Version), Bible Society of India.