15ಅದಕ್ಕೆ ಸೌಲನ ಚಿಕ್ಕಪ್ಪನು--ಸಮುವೇಲನು ನಿನಗೆ ಏನು ಹೇಳಿದನು ದಯಮಾಡಿ ನನಗೆ ತಿಳಿಸು ಅಂದನು.
16ಸೌಲನು ತನ್ನ ಚಿಕ್ಕಪ್ಪನಿಗೆ--ಕತ್ತೆಗಳು ದೊರಕಿದವೆಂದು ಅವನು ನಮಗೆ ಸ್ಪಷ್ಟವಾಗಿ ತಿಳಿಸಿದನು ಅಂದನು. ಆದರೆ ಸಮುವೇಲನು ಹೇಳಿದ ರಾಜ್ಯದ ಮಾತನ್ನು ಸೌಲನು ಅವನಿಗೆ ತಿಳಿಸಲಿಲ್ಲ.
17ಸಮುವೇಲನು ಜನರನ್ನು ಮಿಚ್ಪೆಯಲ್ಲಿ ಕರ್ತನ ಬಳಿಗೆ ಒಟ್ಟಾಗಿ ಕೂಡಿಸಿ ಇಸ್ರಾಯೇಲಿನ ಮಕ್ಕಳಿಗೆಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
18ನಾನು ನಿಮ್ಮನ್ನು ಐಗುಪ್ತ್ಯದಿಂದ ಬರಮಾಡಿ ಐಗುಪ್ತರ ಕೈಯಿಂದಲೂ ನಿಮ್ಮನ್ನು ಬಾಧೆಪಡಿಸಿದ ಸಮಸ್ತ ರಾಜ್ಯಗಳ ಕೈಯಿಂದಲೂ ಬಿಡಿಸಿದೆನು.
19ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಆತನಿಗೆ--ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು ಎಂದು ಹೇಳಿದಿರಿ. ಆದದ ರಿಂದ ಈಗ ಕರ್ತನ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ ನಿಮ್ಮ ಸಹಸ್ರಗಳ ಪ್ರಕಾರವಾ ಗಿಯೂ ಕಾಣಿಸಿಕೊಳ್ಳಿರಿ ಅಂದನು.