1 ಸಾಮುವೇಲು 25

ಈ ಮನುಷ್ಯನ ಹೆಸರು ನಾಬಾಲನು; ಅವನ ಹೆಂಡತಿಯ ಹೆಸರು ಅಬೀಗೈಲ್‌. ಆ ಸ್ತ್ರೀಯು ಮಹಾ ಬುದ್ಧಿವಂತೆಯೂ ಸೌಂದರ್ಯವತಿಯೂ ಆಗಿದ್ದಳು. ಆದರೆ ಆ ಮನುಷ್ಯನು--ಕಠಿಣ ಸ್ವಭಾವದವನಾಗಿಯೂ ತನ್ನ ಕ್ರಿಯೆಗಳಲ್ಲಿ ಕೆಟ್ಟವನಾಗಿಯೂ ಇದ್ದನು; ಅವನು ಕಾಲೇಬನ ವಂಶಸ್ಥನು.

1 Samuel 25:3 (UKJV) Now the name of the man was Nabal; and the name of his wife Abigail: and she was a woman of good understanding, and of a beautiful countenance: but the man was rude and evil in his doings; and he was of the house of Caleb.

1ಸಮುವೇಲನು ಸತ್ತುಹೋದನು; ಇಸ್ರಾಯೇಲ್ಯರೆಲ್ಲರೂ ಕೂಡಿಬಂದು ಅವನಿ ಗೋಸ್ಕರ ಗೋಳಾಡಿ ರಾಮದಲ್ಲಿರುವ ಅವನ ಮನೆ ಯಲ್ಲಿ ಅವನನ್ನು ಹೂಣಿಟ್ಟರು. ದಾವೀದನು ಎದ್ದು ಪಾರಾನ್‌ ಅರಣ್ಯಕ್ಕೆ ಹೋದನು.

2ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.

3ಈ ಮನುಷ್ಯನ ಹೆಸರು ನಾಬಾಲನು; ಅವನ ಹೆಂಡತಿಯ ಹೆಸರು ಅಬೀಗೈಲ್‌. ಆ ಸ್ತ್ರೀಯು ಮಹಾ ಬುದ್ಧಿವಂತೆಯೂ ಸೌಂದರ್ಯವತಿಯೂ ಆಗಿದ್ದಳು. ಆದರೆ ಆ ಮನುಷ್ಯನು--ಕಠಿಣ ಸ್ವಭಾವದವನಾಗಿಯೂ ತನ್ನ ಕ್ರಿಯೆಗಳಲ್ಲಿ ಕೆಟ್ಟವನಾಗಿಯೂ ಇದ್ದನು; ಅವನು ಕಾಲೇಬನ ವಂಶಸ್ಥನು.

4ನಾಬಾಲನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವ ವರ್ತಮಾನವನ್ನು ದಾವೀದನು ಅರಣ್ಯದಲ್ಲಿ ಕೇಳಿದನು.

5ಆಗ ದಾವೀದನು ಹತ್ತು ಮಂದಿ ಯುವಕರನ್ನು ಕಳುಹಿಸಿದನು; ದಾವೀದನು ಅವರಿಗೆ--ನೀವು ಕರ್ಮೆಲಿಗೆ ಹೋಗಿ ನಾಬಾಲನ ಬಳಿಗೆ ಸೇರಿದಾಗ ನನ್ನ ಹೆಸರಿನಿಂದ ಅವನನ್ನು ವಂದಿಸಿ;

Kannada Bible (Old Version), Bible Society of India.