22ಆದದ ರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನ್ನ ಮುಂದೆ ಒಂದು ರೊಟ್ಟಿಯ ತುಂಡನ್ನು ಇರಿಸಲು ನನಗೆ ಅಪ್ಪಣೆ ಕೊಡು; ನೀನು ತಿನ್ನು ಅಂದಳು.
23ಅದಕ್ಕವನು ಒಪ್ಪದೆ--ನಾನು ತಿನ್ನುವದಿಲ್ಲ ಅಂದನು. ಆದರೆ ಅವನ ದಾಸರೂ ಆ ಸ್ತ್ರೀಯೂ ಅವನನ್ನು ಬಲವಂತಮಾಡಿದ್ದರಿಂದ ಅವನು ಅವರ ಮಾತನ್ನು ಕೇಳಿ ನೆಲವನ್ನು ಬಿಟ್ಟು ಎದ್ದು ಮಂಚದ ಮೇಲೆ ಕುಳಿತುಕೊಂಡನು.
24ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು; ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ಹಿಸುಕಿ ಹುಳಿ ಇಲ್ಲದ ರೊಟ್ಟಿಗಳಾಗಿ ಸುಟ್ಟು
25ಸೌಲನ ಮುಂದೆಯೂ ಅವನ ದಾಸರ ಮುಂದೆಯೂ ತಂದಿ ಟ್ಟಳು. ಅವರು ಊಟ ಮಾಡಿ ಎದ್ದು ಆ ರಾತ್ರಿಯಲ್ಲೇ ಹೊರಟುಹೋದರು.