19ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.
20ತಮ್ಮಲ್ಲಿ ದೊಡ್ಡ ಸಂಹಾರವಾಗಿ ಜನರನ್ನು ಕರ್ತನು ಸಾಯಿಸಿದ್ದರಿಂದ ಅವರು ದುಃಖಪಟ್ಟು--ಈ ಪರಿಶುದ್ಧ ದೇವರಾದ ಕರ್ತನ ಮುಂದೆ ನಿಲ್ಲತಕ್ಕವನಾರು? ನಮ್ಮ ಬಳಿಯಿಂದ ಆತನು ಹೋಗತಕ್ಕ ಸ್ಥಳ ಯಾವದು ಎಂದು ಹೇಳಿದರು.
21ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು