1 ಸಾಮುವೇಲು 7

ಕಿರ್ಯತ್ಯಾರೀಮಿನ ಮನುಷ್ಯರು ಬಂದು ಕರ್ತನ ಮಂಜೂಷವನ್ನು ತಕ್ಕೊಂಡು ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟು ಕರ್ತನ ಮಂಜೂಷವನ್ನು ಕಾಯುವದ ಕ್ಕೋಸ್ಕರ ಅವನ ಕುಮಾರನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.

1 Samuel 7:1 (UKJV) And the men of Kirjathjearim came, and fetched up the ark of the LORD, and brought it into the house of Abinadab in the hill, and sanctified Eleazar his son to keep the ark of the LORD.

1ಕಿರ್ಯತ್ಯಾರೀಮಿನ ಮನುಷ್ಯರು ಬಂದು ಕರ್ತನ ಮಂಜೂಷವನ್ನು ತಕ್ಕೊಂಡು ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟು ಕರ್ತನ ಮಂಜೂಷವನ್ನು ಕಾಯುವದ ಕ್ಕೋಸ್ಕರ ಅವನ ಕುಮಾರನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.

2ಮಂಜೂಷವು ಕಿರ್ಯತ್ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರುಷ ಇದ್ದಾಗ ಇಸ್ರಾಯೇಲ್‌ ಮನೆತನದವರೆಲ್ಲರು ಕರ್ತನಿಗೋ ಸ್ಕರ ಗೋಳಾಡುತ್ತಿದ್ದರು.

3ಆಗ ಸಮುವೇಲನು ಇಸ್ರಾಯೇಲ್‌ ಮನೆಯವರಿಗೆಲ್ಲಾ ಮಾತನಾಡಿ--ನೀವು ನಿಮ್ಮ ಪೂರ್ಣಹೃದಯದಿಂದ ಕರ್ತನ ಕಡೆಗೆ ತಿರುಗಿ ನಿಮ್ಮಲ್ಲಿರುವ ಅನ್ಯದೇವರುಗಳನ್ನೂ ಅಷ್ಟೋ ರೆತ್‌ನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ ನಿಮ್ಮ ಹೃದಯವನ್ನು ಕರ್ತನಿಗೆ ಸಿದ್ಧಮಾಡಿ ಆತನೊಬ್ಬನನ್ನೇ ಸೇವಿಸಿದರೆ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಗಳೊ ಳಗಿಂದ ತಪ್ಪಿಸುವನು.

Kannada Bible (Old Version), Bible Society of India.