14ಅವರು ಪಟ್ಟಣಕ್ಕೆ ಏರಿ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ ಇಗೋ, ಸಮುವೇಲನು ಗುಡ್ಡದ ಮೇಲೆ ಏರಿ ಹೋಗು ವದಕ್ಕೆ ಅವರಿಗೆದುರಾಗಿ ಹೊರಟು ಬಂದನು.
15ಆದರೆ ಸೌಲನು ಬರುವದಕ್ಕೆ ಒಂದು ದಿವಸ ಮುಂಚೆ ಕರ್ತನು ಸಮುವೇಲನ ಕಿವಿಯಲ್ಲಿ ತಿಳಿಯ ಪಡಿಸಿದ್ದೇನಂದರೆ--
16ನಾಳೆ ಇಷ್ಟು ಹೊತ್ತಿಗೆ ಬೆನ್ಯಾ ವಿಾನನ ದೇಶದವನಾದ ಒಬ್ಬ ಮನುಷ್ಯನನ್ನು ನಿನ್ನ ಬಳಿಗೆ ಕಳುಹಿಸುವೆನು; ನೀನು ಅವನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಅಭಿಷೇಕಿಸ ಬೇಕು; ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವನು; ನನ್ನ ಜನರ ಕೂಗು ನನ್ನ ಬಳಿಗೆ ಬಂದದರಿಂದ ಅವರನ್ನು ನೋಡಿದ್ದೇನೆ ಎಂಬದು.
17ಸಮುವೇಲನು ಸೌಲನನ್ನು ನೋಡಿದಾಗ ಕರ್ತನು ಅವನಿಗೆ--ಇಗೋ, ನಾನು ನಿನಗೆ ಹೇಳಿದ ಮನು ಷ್ಯನು ಇವನೇ; ಇವನೇ ನನ್ನ ಜನರನ್ನು ಆಳುವನು ಅಂದನು.
18ಸೌಲನು ಬಾಗಲಲ್ಲಿ ಇರುವ ಸಮು ವೇಲನ ಸವಿಾಪಕ್ಕೆ ಬಂದು ಅವನಿಗೆ--ದರ್ಶಿಯ ಮನೆಯು ಎಲ್ಲಿ ಇದೆ ದಯಮಾಡಿ ನೀನು ನನಗೆ ತಿಳಿಸು ಅಂದನು.