1ಆದರೆ ಸೊಲೊಮೋನನು ಕರ್ತನ ಹೆಸರಿಗೋಸ್ಕರ ಮನೆಯನ್ನೂ ತನ್ನ ರಾಜ್ಯ ಕ್ಕೋಸ್ಕರ ಮನೆಯನ್ನೂ ಕಟ್ಟಿಸುವದಕ್ಕೆ ತೀರ್ಮಾ ನಿಸಿಕೊಂಡನು;
2ಆದದರಿಂದ ಸೊಲೊಮೋನನು ಎಪ್ಪತ್ತು ಸಾವಿರ ಹೊರೆಹೊರುವವರನ್ನೂ ಬೆಟ್ಟದಲ್ಲಿ ಎಂಭತ್ತು ಸಾವಿರ ಕಡಿಯುವವರನ್ನೂ ಈ ಕೆಲಸದವರ ಮೇಲ್ವಿಚಾರಕರಾಗಿರಲು ಮೂರು ಸಾವಿರದ ಆರು ನೂರು ಮಂದಿಯನ್ನೂ ಲೆಕ್ಕಿಸಿ ನೇಮಿಸಿದನು.
3ಇದ ಲ್ಲದೆ ಸೊಲೊಮೋನನು ತೂರಿನ ಅರಸನಾದ ಹೂರಾಮನಿಗೆ--ವಾಸವಾಗಿರುವ ಮನೆಯನ್ನು ತನಗೆ ಕಟ್ಟಿಸಲು ನೀನು ನನ್ನ ತಂದೆಯಾದ ದಾವೀದನಿಗೆ ದೇವದಾರು ಮರಗಳನ್ನು ಕಳುಹಿಸಿ ಅವನಿಗೋಸ್ಕರ ಹೇಗೆ ಮಾಡಿದಿಯೋ ಹಾಗೆಯೇ ನನಗೂ ಮಾಡು.