1ಆದರೆ ಸೊಲೊಮೋನನು ಕರ್ತನ ಹೆಸರಿಗೋಸ್ಕರ ಮನೆಯನ್ನೂ ತನ್ನ ರಾಜ್ಯ ಕ್ಕೋಸ್ಕರ ಮನೆಯನ್ನೂ ಕಟ್ಟಿಸುವದಕ್ಕೆ ತೀರ್ಮಾ ನಿಸಿಕೊಂಡನು;
2ಆದದರಿಂದ ಸೊಲೊಮೋನನು ಎಪ್ಪತ್ತು ಸಾವಿರ ಹೊರೆಹೊರುವವರನ್ನೂ ಬೆಟ್ಟದಲ್ಲಿ ಎಂಭತ್ತು ಸಾವಿರ ಕಡಿಯುವವರನ್ನೂ ಈ ಕೆಲಸದವರ ಮೇಲ್ವಿಚಾರಕರಾಗಿರಲು ಮೂರು ಸಾವಿರದ ಆರು ನೂರು ಮಂದಿಯನ್ನೂ ಲೆಕ್ಕಿಸಿ ನೇಮಿಸಿದನು.
3ಇದ ಲ್ಲದೆ ಸೊಲೊಮೋನನು ತೂರಿನ ಅರಸನಾದ ಹೂರಾಮನಿಗೆ--ವಾಸವಾಗಿರುವ ಮನೆಯನ್ನು ತನಗೆ ಕಟ್ಟಿಸಲು ನೀನು ನನ್ನ ತಂದೆಯಾದ ದಾವೀದನಿಗೆ ದೇವದಾರು ಮರಗಳನ್ನು ಕಳುಹಿಸಿ ಅವನಿಗೋಸ್ಕರ ಹೇಗೆ ಮಾಡಿದಿಯೋ ಹಾಗೆಯೇ ನನಗೂ ಮಾಡು.
4ಇಗೋ, ನನ್ನ ದೇವರಾದ ಕರ್ತನಿಗೆ ಅದನ್ನು ಪ್ರತಿಷ್ಠೆ ಮಾಡುವದಕ್ಕೂ ಆತನ ಮುಂದೆ ಪರಿಮಳ ಧೂಪವನ್ನು ಸುಡುವದಕ್ಕೂ ನಿತ್ಯ ಸಮ್ಮುಖದ ರೊಟ್ಟಿ ಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆಗಳ ಲ್ಲಿಯೂ ಇಸ್ರಾಯೇಲಿಗೆ ನಿರಂತರವಾಗಿರಲು ನೇಮಿ ಸಿದ ನಮ್ಮ ದೇವರಾದ ಕರ್ತನ ಹಬ್ಬಗಳಲ್ಲಿಯೂ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋ ಸ್ಕರವೂ ಆತನ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.
5ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ.