2 ಉತ್ತರಕಾಲವೃತ್ತಾಂತ 2

ಅವನು ದಾನನ ಕುಮಾರ್ತೆ ಗಳಲ್ಲಿರುವ ಒಬ್ಬಳ ಮಗನಾಗಿದ್ದಾನೆ; ಅವನ ತಂದೆ ತೂರಿನ ಮನುಷ್ಯನು; ಅವನು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಕಲ್ಲು ಮರ ಧೂಮ್ರವರ್ಣ ನೀಲವರ್ಣ ರಕ್ತವರ್ಣ ನಾರಿನ ವಸ್ತ್ರ, ಇವುಗಳಲ್ಲಿ ಕೆಲಸವನ್ನು ಮಾಡುವದಕ್ಕೂ ಕೌಶಲ್ಯವುಳ್ಳ ನಿನ್ನ ಜನರ ಸಂಗಡವೂ ನಿನ್ನ ತಂದೆಯೂ ನನ್ನ ಒಡೆಯನೂ ಆದ ದಾವೀದನ ಕೌಶಲ್ಯವುಳ್ಳವರ ಸಂಗಡವೂ ಅವನು ತನಗೆ ಹೇಳಿದ ಸಮಸ್ತ ಕಲೆಯನ್ನು ಗ್ರಹಿಸುವದಕ್ಕೂ ಬಲ್ಲವನಾಗಿ ದ್ದಾನೆ.

2 Chronicles 2:14 (UKJV) The son of a woman of the daughters of Dan, and his father was a man of Tyre, skilful to work in gold, and in silver, in brass, in iron, in stone, and in timber, in purple, in blue, and in fine linen, and in crimson; also to grave any manner of graving, and to find out every device which shall be put to him, with your cunning men, and with the cunning men of my lord David your father.

12ಇದಲ್ಲದೆ ಹಿರಾಮನು ಕರ್ತ ನಿಗೋಸ್ಕರ ಮನೆಯನ್ನೂ ತನ್ನ ರಾಜ್ಯಕ್ಕೋಸ್ಕರ ಮನೆ ಯನ್ನೂ ಕಟ್ಟಿಸುವದಕ್ಕೆ ಅರಸನಾದ ದಾವೀದನಿಗೆ ಜ್ಞಾನವುಳ್ಳಂಥ ಬುದ್ಧಿಯನ್ನು ಗ್ರಹಿಕೆಯನ್ನು ತಿಳು ಕೊಂಡಂಥ ಮಗನನ್ನು ಕೊಟ್ಟು, ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿದ ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿಸಲ್ಪಡಲಿ.

13ಈಗ ನಾನು ಜ್ಞಾನವಂತ ನಾದಂಥ ಗ್ರಹಿಕೆಯನ್ನು ತಿಳಿದುಕೊಂಡಂಥ ಮನುಷ್ಯ ನನ್ನು ಕಳುಹಿಸಿದ್ದೇನೆ.

14ಅವನು ದಾನನ ಕುಮಾರ್ತೆ ಗಳಲ್ಲಿರುವ ಒಬ್ಬಳ ಮಗನಾಗಿದ್ದಾನೆ; ಅವನ ತಂದೆ ತೂರಿನ ಮನುಷ್ಯನು; ಅವನು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಕಲ್ಲು ಮರ ಧೂಮ್ರವರ್ಣ ನೀಲವರ್ಣ ರಕ್ತವರ್ಣ ನಾರಿನ ವಸ್ತ್ರ, ಇವುಗಳಲ್ಲಿ ಕೆಲಸವನ್ನು ಮಾಡುವದಕ್ಕೂ ಕೌಶಲ್ಯವುಳ್ಳ ನಿನ್ನ ಜನರ ಸಂಗಡವೂ ನಿನ್ನ ತಂದೆಯೂ ನನ್ನ ಒಡೆಯನೂ ಆದ ದಾವೀದನ ಕೌಶಲ್ಯವುಳ್ಳವರ ಸಂಗಡವೂ ಅವನು ತನಗೆ ಹೇಳಿದ ಸಮಸ್ತ ಕಲೆಯನ್ನು ಗ್ರಹಿಸುವದಕ್ಕೂ ಬಲ್ಲವನಾಗಿ ದ್ದಾನೆ.

15ಈಗ ನನ್ನ ಒಡೆಯನು ಹೇಳಿದ ಆ ಗೋಧಿಯನ್ನೂ ಜವೆಗೋಧಿಯನ್ನೂ ಎಣ್ಣೆಯನ್ನೂ ದ್ರಾಕ್ಷಾ ರಸವನ್ನೂ ತನ್ನ ಸೇವಕರಿಗೆ ಕಳುಹಿಸಲಿ.

16ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ತೆಪ್ಪಗಳಲ್ಲಿ ಸಮುದ್ರದ ಮಾರ್ಗವಾಗಿ ಯೊಪ್ಪಕ್ಕೆ ತಕ್ಕೊಂಡು ಬರುತ್ತೇವೆ; ನೀನು ಅವುಗ ಳನ್ನು ಯೆರೂಸಲೇಮಿಗೆ ಒಯ್ಯಬಹುದು.

Kannada Bible (Old Version), Bible Society of India.