5ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ.
6ಆತನಿಗೆ ಮನೆಯನ್ನು ಕಟ್ಟಿಸಲು ಶಕ್ತಿಯನ್ನು ಹೊಂದಿ ದವನು ಯಾರು? ಆಕಾಶಗಳೂ ಆಕಾಶಾಕಾಶಗಳೂ ಆತನನ್ನು ಹಿಡಿಯಲಾರವು; ಆತನ ಮುಂದೆ ಯಜ್ಞ ವನ್ನು ಸುಡುವದಕ್ಕೆ ಹೊರತಾಗಿ ಆತನಿಗೆ ಮನೆಯನ್ನು ಕಟ್ಟಿಸಲು ನಾನು ಎಷ್ಟರವನು?
7ಆದದರಿಂದ ಬಂಗಾರ ದಲ್ಲಿಯೂ ಬೆಳ್ಳಿಯಲ್ಲಿಯೂ ತಾಮ್ರದಲ್ಲಿಯೂ ಕಬ್ಬಿಣ ದಲ್ಲಿಯೂ ರಕ್ತವರ್ಣ ಲೋಹಿತವರ್ಣ ನೀಲವರ್ಣ ಗಳಲ್ಲಿಯೂ ಕೆಲಸವನ್ನು ಮಾಡಲು ಜ್ಞಾನವುಳ್ಳವನಾ ಗಿಯೂ ನನ್ನ ತಂದೆಯಾದ ದಾವೀದನು ಸಿದ್ಧ ಮಾಡಿದ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿಯೂ ನನ್ನ ಬಳಿಯಲ್ಲಿರುವ ಗ್ರಹಿಕೆಯುಳ್ಳವರ ಸಂಗಡ ಕೆತ್ತಲು ತಿಳುವಳಿಕೆಯುಳ್ಳವನಾಗಿಯೂ ಇರುವವನನ್ನು ನನ್ನ ಬಳಿಗೆ ಕಳುಹಿಸು.
8ಇದಲ್ಲದೆ ನೀನು ಇಲ್ಲಿಗೆ ದೇವದಾರು ಮರಗಳನ್ನೂ ತುರಾಯಿಮರಗಳನ್ನೂ ಸುಗಂಧದ ಮರಗಳನ್ನೂ ಲೆಬನೋನಿನಿಂದ ನನಗೆ ಕಳುಹಿಸು. ಲೆಬನೋನಿನಲ್ಲಿ ಮರಗಳನ್ನು ಕಡಿಯಲು ನಿನ್ನ ಸೇವ ಕರು ಜಾಣರಾಗಿದ್ದಾರೆ.
9ಇಗೋ, ನನಗೋಸ್ಕರ ಮರ ಗಳನ್ನು ಬಹಳವಾಗಿ ಸಿದ್ಧಮಾಡುವದಕ್ಕೆ ನನ್ನ ಸೇವಕರು ನಿನ್ನ ಸೇವಕರ ಸಂಗಡ ಇರುವರು. ನಾನು ಕಟ್ಟಿಸುವ ಆಲಯವು ದೊಡ್ಡದಾಗಿಯೂ ಆಶ್ಚರ್ಯವಾದದ್ದಾ ಗಿಯೂ ಇರುವದು.