18ಆದರೆ ಇಸ್ರಾಯೇಲಿನ ಅರಸ ನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ--ಲೆಬನೋನಿನಲ್ಲಿದ್ದ ಒಂದು ಮುಳ್ಳು ಗಿಡವು ಲೆಬನೋನಿನಲ್ಲಿರುವ ದೇವದಾರಿಗೆ--ನೀನು ನನ್ನ ಮಗನಿಗೆ ಹೆಂಡತಿಯಾಗಿರಲು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋ ನಿನಲ್ಲಿದ್ದ ಅಡವಿಯ ಮೃಗವು ಹಾದುಹೋಗುತ್ತಿರು ವಾಗ ಆ ಮುಳ್ಳು ಗಿಡವನ್ನು ತುಳಿಯಿತು.
19ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು.
20ಆದರೆ ಅಮ ಚ್ಯನು ಕೇಳದೆಹೋದನು. ಯಾಕಂದರೆ ಅವರು ಎದೋ ಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ ಅವರನ್ನು ಶತ್ರುಗಳ ಕೈಯಲ್ಲಿ ಒಪ್ಪಿಸುವ ಹಾಗೆ ಇದು ದೇವರಿಂದ ಆಯಿತು.
21ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು.
22ಯೆಹೂದದ ವರು ಇಸ್ರಾಯೇಲಿನವರ ಮುಂದೆ ಸೋತು ತಮ್ಮತಮ್ಮ ಗುಡಾರಕ್ಕೆ ಓಡಿಹೋದರು.