2 ಉತ್ತರಕಾಲವೃತ್ತಾಂತ 25

ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು.

2 Chronicles 25:21 (UKJV) So Joash the king of Israel went up; and they saw one another in the face, both he and Amaziah king of Judah, at Bethshemesh, which belongs to Judah.

19ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು.

20ಆದರೆ ಅಮ ಚ್ಯನು ಕೇಳದೆಹೋದನು. ಯಾಕಂದರೆ ಅವರು ಎದೋ ಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ ಅವರನ್ನು ಶತ್ರುಗಳ ಕೈಯಲ್ಲಿ ಒಪ್ಪಿಸುವ ಹಾಗೆ ಇದು ದೇವರಿಂದ ಆಯಿತು.

21ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು.

22ಯೆಹೂದದ ವರು ಇಸ್ರಾಯೇಲಿನವರ ಮುಂದೆ ಸೋತು ತಮ್ಮತಮ್ಮ ಗುಡಾರಕ್ಕೆ ಓಡಿಹೋದರು.

23ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೋವಾಹಾಜನ ಮಗನಾದ ಯೋವಾಷನ ಮಗನಾದ ಯೆಹೂದದ ಅರಸನಾಗಿರುವ ಅಮಚ್ಯನನ್ನು ಬೇತ್ಷೆಮೆಷಿನ ಬಳಿ ಯಲ್ಲಿ ಹಿಡಿದುಕೊಂಡು ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದು ಯೆರೂಸಲೇಮಿನ ಗೋಡೆಯನ್ನು ಎಫ್ರಾಯಾಮನ ಬಾಗಲು ಮೊದಲುಗೊಂಡು ಮೂಲೆಯ ಬಾಗಲ ಮಟ್ಟಿಗೂ ನಾನೂರು ಮೊಳ ಉದ್ದ ಕೆಡವಿಬಿಟ್ಟು

Kannada Bible (Old Version), Bible Society of India.