21ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು.
22ಯೆಹೂದದ ವರು ಇಸ್ರಾಯೇಲಿನವರ ಮುಂದೆ ಸೋತು ತಮ್ಮತಮ್ಮ ಗುಡಾರಕ್ಕೆ ಓಡಿಹೋದರು.
23ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೋವಾಹಾಜನ ಮಗನಾದ ಯೋವಾಷನ ಮಗನಾದ ಯೆಹೂದದ ಅರಸನಾಗಿರುವ ಅಮಚ್ಯನನ್ನು ಬೇತ್ಷೆಮೆಷಿನ ಬಳಿ ಯಲ್ಲಿ ಹಿಡಿದುಕೊಂಡು ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದು ಯೆರೂಸಲೇಮಿನ ಗೋಡೆಯನ್ನು ಎಫ್ರಾಯಾಮನ ಬಾಗಲು ಮೊದಲುಗೊಂಡು ಮೂಲೆಯ ಬಾಗಲ ಮಟ್ಟಿಗೂ ನಾನೂರು ಮೊಳ ಉದ್ದ ಕೆಡವಿಬಿಟ್ಟು
24ಅವನು ಓಬೇದೆದೋಮನ ಬಳಿಯಲ್ಲಿ ಕರ್ತನ ಆಲಯದಲ್ಲಿ ಸಿಕ್ಕಿದ ಬೆಳ್ಳಿ ಬಂಗಾ ರವನ್ನು ಎಲ್ಲಾ ಸಾಮಾನುಗಳನ್ನು ಅರಸನ ಮನೆಯ ಬೊಕ್ಕಸಗಳನ್ನು ಕೆಲವರನ್ನು ಸೆರೆಹಿಡಿದು ತೆಗೆದು ಕೊಂಡು ಸಮಾರ್ಯಕ್ಕೆ ತಿರುಗಿಹೋದರು.
25ಯೆಹೂದದ ಅರಸನಾಗಿರುವ ಯೋವಾಷನ ಮಗನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೋವಾಷನು ಸತ್ತ ಮೇಲೆ ಹದಿನೈದು ವರುಷ ಬದುಕಿದನು.