2 ಉತ್ತರಕಾಲವೃತ್ತಾಂತ 25

ಆಗ ಅಮಚ್ಯನು ದೇವರ ಮನುಷ್ಯನಿಗೆ--ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ ನೂರು ತಲಾಂತುಗಳಿಗೋಸ್ಕರ ಏನು ಮಾಡಬೇಕು ಅಂದನು. ಅದಕ್ಕೆ ದೇವರ ಮನುಷ್ಯನು--ಕರ್ತನು ಇದಕ್ಕಿಂತ ಅಧಿಕವಾಗಿ ನಿನಗೆ ಕೊಡಲು ಶಕ್ತನು ಅಂದನು.

2 Chronicles 25:9 (UKJV) And Amaziah said to the man of God, But what shall we do for the hundred talents which I have given to the army of Israel? And the man of God answered, The LORD is able to give you much more than this.

7ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ.

8ನೀನು ಹೋದರೆ ಹೋಗು ಅದನ್ನು ಮಾಡು; ಯುದ್ಧಕ್ಕೆ ಬಲಗೊಳ್ಳು. ದೇವರು ಶತ್ರುವಿನ ಮುಂದೆ ನಿನ್ನನ್ನು ಬೀಳಮಾಡುವನು; ಯಾಕಂದರೆ ಸಹಾಯ ಕೊಡುವದಕ್ಕೂ ಬೀಳಮಾಡುವದಕ್ಕೂ ದೇವರಿಗೆ ಶಕ್ತಿ ಉಂಟು ಅಂದನು.

9ಆಗ ಅಮಚ್ಯನು ದೇವರ ಮನುಷ್ಯನಿಗೆ--ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ ನೂರು ತಲಾಂತುಗಳಿಗೋಸ್ಕರ ಏನು ಮಾಡಬೇಕು ಅಂದನು. ಅದಕ್ಕೆ ದೇವರ ಮನುಷ್ಯನು--ಕರ್ತನು ಇದಕ್ಕಿಂತ ಅಧಿಕವಾಗಿ ನಿನಗೆ ಕೊಡಲು ಶಕ್ತನು ಅಂದನು.

10ಆಗ ಅಮಚ್ಯನು ಎಫ್ರಾಯಾಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವರನ್ನು ಪ್ರತ್ಯೇಕಿಸಿದನು. ಆದ ಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪದ ಉರಿಯಿಂದ ತಮ್ಮ ಮನೆಗೆ ತಿರುಗಿದರು.

11ಅಮಚ್ಯನು ತನ್ನನ್ನು ಬಲಪಡಿಸಿ ತನ್ನ ಜನರನ್ನು ನಡಿಸಿಕೊಂಡು ಉಪ್ಪಿನ ತಗ್ಗಿಗೆ ಹೋಗಿ ಅಲ್ಲಿ ಸೇಯಾ ರಿನ ಮಕ್ಕಳೊಳಗೆ ಹತ್ತು ಸಾವಿರ ಮಂದಿಯನ್ನು ಹೊಡೆದನು.

Kannada Bible (Old Version), Bible Society of India.