6ಇದಲ್ಲದೆ ಇಸ್ರಾಯೇಲಿನವರಲ್ಲಿ ನೂರು ಬೆಳ್ಳಿ ತಲಾಂತುಗಳಿಂದ ಪರಾಕ್ರಮಶಾಲಿಗಳಾದ ಒಂದು ಲಕ್ಷ ಮಂದಿಯನ್ನು ಕೂಲಿಗೆ ತೆಗೆದುಕೊಂಡನು.
7ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ.
8ನೀನು ಹೋದರೆ ಹೋಗು ಅದನ್ನು ಮಾಡು; ಯುದ್ಧಕ್ಕೆ ಬಲಗೊಳ್ಳು. ದೇವರು ಶತ್ರುವಿನ ಮುಂದೆ ನಿನ್ನನ್ನು ಬೀಳಮಾಡುವನು; ಯಾಕಂದರೆ ಸಹಾಯ ಕೊಡುವದಕ್ಕೂ ಬೀಳಮಾಡುವದಕ್ಕೂ ದೇವರಿಗೆ ಶಕ್ತಿ ಉಂಟು ಅಂದನು.
9ಆಗ ಅಮಚ್ಯನು ದೇವರ ಮನುಷ್ಯನಿಗೆ--ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ ನೂರು ತಲಾಂತುಗಳಿಗೋಸ್ಕರ ಏನು ಮಾಡಬೇಕು ಅಂದನು. ಅದಕ್ಕೆ ದೇವರ ಮನುಷ್ಯನು--ಕರ್ತನು ಇದಕ್ಕಿಂತ ಅಧಿಕವಾಗಿ ನಿನಗೆ ಕೊಡಲು ಶಕ್ತನು ಅಂದನು.
10ಆಗ ಅಮಚ್ಯನು ಎಫ್ರಾಯಾಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವರನ್ನು ಪ್ರತ್ಯೇಕಿಸಿದನು. ಆದ ಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪದ ಉರಿಯಿಂದ ತಮ್ಮ ಮನೆಗೆ ತಿರುಗಿದರು.