1ಆಗ ಯೆಹೂದ ಜನರೆಲ್ಲರು ಹದಿನಾರು ವರುಷದವನಾದ ಉಜ್ಜೀಯನನ್ನು ತಕ್ಕೊಂಡು ಅವನನ್ನು ಅವನ ತಂದೆಯಾದ ಅಮಚ್ಯ ನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2ಅರಸನು ತನ್ನ ಪಿತೃಗಳ ಸಂಗಡ ಮಲಗಿದ ತರುವಾಯ ಇವನು ಎಲೋತನ್ನು ಕಟ್ಟಿಸಿ ಅದನ್ನು ಯೆಹೂದಕ್ಕೆ ತಿರಿಗಿ ಸೇರಿಸಿದನು.
3ಉಜ್ಜೀಯನು ಆಳಲು ಆರಂಭಿಸಿದಾಗ ಹದಿನಾರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರುಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು; ಅವಳು ಯೆರೂಸಲೇಮಿನವ ಳಾಗಿದ್ದಳು.