2 ಉತ್ತರಕಾಲವೃತ್ತಾಂತ 26

ಅರಸನಾದ ಉಜ್ಜೀಯನು ಸಾಯುವ ದಿವಸದ ವರೆಗೂ ಕುಷ್ಠರೋಗಿಯಾಗಿದ್ದನು. ಅವನು ಕುಷ್ಠರೋಗವುಳ್ಳವನಾದದರಿಂದ ಪ್ರತ್ಯೇಕವಾದ ಮನೆ ಯಲ್ಲಿ ವಾಸವಾಗಿದ್ದನು. ಯಾಕಂದರೆ ಅವನು ಕರ್ತನ ಆಲಯದಿಂದ ತೆಗೆದುಹಾಕಲ್ಪಟ್ಟವನಾಗಿದ್ದನು. ಅವನ ಮಗನಾದ ಯೋತಾಮನು ಅರಸನ ಮನೆಯ ಮೇಲೆ ಇದ್ದು ದೇಶದ ಜನರಿಗೆ ನ್ಯಾಯತೀರಿಸುತ್ತಾ ಇದ್ದನು.

2 Chronicles 26:21 (UKJV) And Uzziah the king was a leper unto the day of his death, and dwelt in a several house, being a leper; for he was cut off from the house of the LORD: and Jotham his son was over the king's house, judging the people of the land.

19ಆಗ ಉಜ್ಜೀಯನು ಕೋಪಿಸಿ ಕೊಂಡನು; ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಅವನು ಯಾಜಕರ ಮೇಲೆ ಕೋಪ ಮಾಡುವಾಗ ಕರ್ತನ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಎದ್ದಿತು.

20ಆಗ ಪ್ರಧಾನ ಯಾಜಕನಾದ ಅಜರ್ಯನೂ ಯಾಜಕರೆಲ್ಲರೂ ಅವ ನನ್ನು ದೃಷ್ಟಿಸಿದಾಗ ಇಗೋ, ಅವನು ತನ್ನ ಹಣೆ ಯಲ್ಲಿ ಕುಷ್ಠವುಳ್ಳವನಾಗಿದ್ದನು. ಆದದರಿಂದ ಅವರು ಅವನನ್ನು ಅಲ್ಲಿಂದ ದೊಬ್ಬಿಹಾಕಿದರು. ಕರ್ತನು ಅವ ನನ್ನು ಹೊಡೆದದ್ದರಿಂದ ಅವನು ಹೊರಗೆ ಹೋಗಲು ತ್ವರೆಪಟ್ಟನು.

21ಅರಸನಾದ ಉಜ್ಜೀಯನು ಸಾಯುವ ದಿವಸದ ವರೆಗೂ ಕುಷ್ಠರೋಗಿಯಾಗಿದ್ದನು. ಅವನು ಕುಷ್ಠರೋಗವುಳ್ಳವನಾದದರಿಂದ ಪ್ರತ್ಯೇಕವಾದ ಮನೆ ಯಲ್ಲಿ ವಾಸವಾಗಿದ್ದನು. ಯಾಕಂದರೆ ಅವನು ಕರ್ತನ ಆಲಯದಿಂದ ತೆಗೆದುಹಾಕಲ್ಪಟ್ಟವನಾಗಿದ್ದನು. ಅವನ ಮಗನಾದ ಯೋತಾಮನು ಅರಸನ ಮನೆಯ ಮೇಲೆ ಇದ್ದು ದೇಶದ ಜನರಿಗೆ ನ್ಯಾಯತೀರಿಸುತ್ತಾ ಇದ್ದನು.

22ಉಜ್ಜೀಯನ ಮಿಕ್ಕಾದ ಕ್ರಿಯೆಗಳನ್ನು, ಮೊದಲನೆ ಯವುಗಳನ್ನೂ ಕಡೆಯವುಗಳನ್ನೂ ಆಮೋಚನ ಮಗ ನಾದ ಯೆಶಾಯನು ಬರೆದನು. ಉಜ್ಜೀಯನು ತನ್ನ ಪಿತೃಗಳ ಸಂಗಡ ಮಲಗಿದನು;

23ಅವರು ಅರಸುಗಳಿಗೆ ಇದ್ದ ಸ್ಮಶಾನ ಭೂಮಿಯಲ್ಲಿ ಅವನ ಪಿತೃಗಳ ಸಂಗಡ ಅವನನ್ನು ಹೂಣಿಟ್ಟರು. ಯಾಕಂದರೆ--ಅವನು ಕುಷ್ಠ ರೋಗವುಳ್ಳವನು ಅಂದುಕೊಂಡರು. ಅವನ ಮಗ ನಾದ ಯೋತಾಮನು ಅವನಿಗೆ ಬದಲಾಗಿ ಆಳಿದನು.

Kannada Bible (Old Version), Bible Society of India.