2 ಉತ್ತರಕಾಲವೃತ್ತಾಂತ 26

ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾಗಿದ್ದ ಜೆಕರೀಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಕರ್ತನನ್ನು ಹುಡು ಕುವ ದಿವಸಗಳ ಮಟ್ಟಿಗೂ ದೇವರು ಅವನನ್ನು ಅಭಿ ವೃದ್ಧಿಪಡಿಸಿದನು.

2 Chronicles 26:5 (UKJV) And he sought God in the days of Zechariah, who had understanding in the visions of God: and as long as he sought the LORD, God made him to prosper.

3ಉಜ್ಜೀಯನು ಆಳಲು ಆರಂಭಿಸಿದಾಗ ಹದಿನಾರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರುಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು; ಅವಳು ಯೆರೂಸಲೇಮಿನವ ಳಾಗಿದ್ದಳು.

4ಅವನು ತನ್ನ ತಂದೆಯಾದ ಅಮಚ್ಯನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಸರಿ ಯಾದದ್ದನ್ನು ಮಾಡಿದನು.

5ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾಗಿದ್ದ ಜೆಕರೀಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಕರ್ತನನ್ನು ಹುಡು ಕುವ ದಿವಸಗಳ ಮಟ್ಟಿಗೂ ದೇವರು ಅವನನ್ನು ಅಭಿ ವೃದ್ಧಿಪಡಿಸಿದನು.

6ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ ಗತ್‌ ಗೋಡೆಯನ್ನೂ ಯಬ್ನೆಯ ಗೋಡೆಯನ್ನೂ ಅಷ್ಡೋದಿನ ಗೋಡೆಯನ್ನೂ ಕೆಡವಿ ಬಿಟ್ಟು ಫಿಲಿಷ್ಟಿಯರ ಮಧ್ಯದಲ್ಲಿ ಅಷ್ಡೋ ದಿನ ಬಳಿಯಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.

7ಇದ ಲ್ಲದೆ ಫಿಲಿಷ್ಟಿಯರ ಮೇಲೆಯೂ ಗೂರ್‌ಬಾಳಿನಲ್ಲಿ ವಾಸವಾಗಿದ್ದ ಅರಬ್ಬಿಯರ ಮೇಲೆಯೂ ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿ ದಾಗ ದೇವರು ಅವನಿಗೆ ಸಹಾಯಕೊಟ್ಟನು.

Kannada Bible (Old Version), Bible Society of India.