1ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನು ತನ್ನ ಪಿತೃವಾದ ದಾವೀದನ ಹಾಗೆ ಕರ್ತನ ದೃಷ್ಟಿ ಯಲ್ಲಿ ಸರಿಯಾದದ್ದನ್ನು ಮಾಡಿದವನಲ್ಲ.
2ಅವನು ಇಸ್ರಾಯೇಲಿನ ಅರಸುಗಳ ಮಾರ್ಗಗಳಲ್ಲಿ ನಡೆದು ಬಾಳನಿಗೋಸ್ಕರ ಎರಕ ಹೊಯಿದ ವಿಗ್ರಹಗಳನ್ನು ಮಾಡಿಸಿದನು.
3ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.