24ಇದಲ್ಲದೆ ಆಹಾಜನು ದೇವರ ಮನೆಯ ಸಾಮಾನುಗಳನ್ನು ಕೂಡಿಸಿ ದೇವರ ಆಲಯದ ಸಾಮಾನುಗಳನ್ನು ತುಂಡುಗಳಾಗಿ ಕತ್ತರಿಸಿ ಕರ್ತನ ಮನೆಯ ಬಾಗಿಲುಗಳನ್ನು ಮುಚ್ಚಿಬಿಟ್ಟು ಯೆರೂ ಸಲೇಮಿನ ಸಮಸ್ತ ಮೂಲೆಗಳಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
25ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪಸುಡುವದಕ್ಕಾಗಿ ಎತ್ತರ ಸ್ಥಳಗಳನ್ನು ಕಟ್ಟಿಸಿ ತನ್ನ ಪಿತೃಗಳ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದನು.
26ಅವನ ಇತರ ಕ್ರಿಯೆಗಳೂ ಅವನ ಸಕಲ ಮಾರ್ಗಗಳೂ--ಮೊದಲನೆಯವುಗಳೂ ಕಡೆಯವು ಗಳೂ ಇಗೋ, ಯೆಹೂದದ ಇಸ್ರಾಯೇಲ್ಯರ ಅರಸು ಗಳ ಪುಸ್ತಕದಲ್ಲಿ ಬರೆಯಲ್ಪಟ್ಟವೆ.
27ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ಯೆರೂಸಲೇಮ್ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಇಸ್ರಾಯೇಲಿನ ಅರಸುಗಳ ಸಮಾಧಿಯ ಸ್ಥಳದಲ್ಲಿ ಅವನನ್ನು ತರಲಿಲ್ಲ. ಅವನ ಮಗನಾದ ಹಿಜ್ಕೀಯನು ಅವನಿಗೆ ಬದಲಾಗಿ ಆಳಿದನು.