25ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪಸುಡುವದಕ್ಕಾಗಿ ಎತ್ತರ ಸ್ಥಳಗಳನ್ನು ಕಟ್ಟಿಸಿ ತನ್ನ ಪಿತೃಗಳ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದನು.
26ಅವನ ಇತರ ಕ್ರಿಯೆಗಳೂ ಅವನ ಸಕಲ ಮಾರ್ಗಗಳೂ--ಮೊದಲನೆಯವುಗಳೂ ಕಡೆಯವು ಗಳೂ ಇಗೋ, ಯೆಹೂದದ ಇಸ್ರಾಯೇಲ್ಯರ ಅರಸು ಗಳ ಪುಸ್ತಕದಲ್ಲಿ ಬರೆಯಲ್ಪಟ್ಟವೆ.
27ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ಯೆರೂಸಲೇಮ್ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಇಸ್ರಾಯೇಲಿನ ಅರಸುಗಳ ಸಮಾಧಿಯ ಸ್ಥಳದಲ್ಲಿ ಅವನನ್ನು ತರಲಿಲ್ಲ. ಅವನ ಮಗನಾದ ಹಿಜ್ಕೀಯನು ಅವನಿಗೆ ಬದಲಾಗಿ ಆಳಿದನು.