2 ಉತ್ತರಕಾಲವೃತ್ತಾಂತ 28

ಹಾಗೆಯೇ ಅವನು ಬೆಟ್ಟಗಳಲ್ಲಿಯೂ ಮೇಡುಗಳ ಮೇಲೆಯೂ ಎಲ್ಲಾ ಹಸುರು ಗಿಡಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.

2 Chronicles 28:4 (UKJV) He sacrificed also and burnt incense in the high places, and on the hills, and under every green tree.

2ಅವನು ಇಸ್ರಾಯೇಲಿನ ಅರಸುಗಳ ಮಾರ್ಗಗಳಲ್ಲಿ ನಡೆದು ಬಾಳನಿಗೋಸ್ಕರ ಎರಕ ಹೊಯಿದ ವಿಗ್ರಹಗಳನ್ನು ಮಾಡಿಸಿದನು.

3ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.

4ಹಾಗೆಯೇ ಅವನು ಬೆಟ್ಟಗಳಲ್ಲಿಯೂ ಮೇಡುಗಳ ಮೇಲೆಯೂ ಎಲ್ಲಾ ಹಸುರು ಗಿಡಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.

5ಆದದರಿಂದ ಅವನ ದೇವರಾದ ಕರ್ತನು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದನು. ಅರಾಮ್ಯರು ಅವನನ್ನು ಹೊಡೆದು ಅವರಲ್ಲಿ ಅನೇಕರನ್ನು ಸೆರೆ ಯಾಗಿ ಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಇವನು ಇಸ್ರಾಯೇಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪ ಟ್ಟದ್ದರಿಂದ ಅವನು ಇವನನ್ನು ಹೊಡೆದು ದೊಡ್ಡ ಸಂಹಾರ ಮಾಡಿದನು.

6ಅವರು ತಮ್ಮ ಪಿತೃಗಳ ಕರ್ತನಾದ ದೇವರನ್ನು ಬಿಟ್ಟದ್ದರಿಂದ ರೆಮಲ್ಯನ ಮಗ ನಾದ ಪೆಕಹನು ಒಂದೇ ದಿವಸದೊಳಗೆ ಯೆಹೂ ದದವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು; ಇವರೆಲ್ಲರು ಪರಾಕ್ರಮಶಾಲಿ ಗಳಾಗಿದ್ದರು.

Kannada Bible (Old Version), Bible Society of India.