2 ಉತ್ತರಕಾಲವೃತ್ತಾಂತ 31

ಇದೆಲ್ಲಾ ತೀರಿದ ತರುವಾಯ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲ್ಯರು ಯೆಹೂ ದದ ಪಟ್ಟಣಗಳಿಗೆ ಹೊರಟು ಹೋಗಿ ವಿಗ್ರಹಗಳನ್ನು ಮುರಿದು ತೋಪುಗಳನ್ನು ಕಡಿದು ಸಮಸ್ತ ಯೆಹೂದ ಬೆನ್ಯಾವಿಾನ್‌ ಎಫ್ರಾಯಾಮ್‌ ಮನಸ್ಸೆ ದೇಶಗಳಲ್ಲಿ ಅವುಗಳನ್ನೆಲ್ಲಾ ತೀರಿಸುವ ಪರ್ಯಂತರ ಉನ್ನತ ಸ್ಥಳ ಗಳನ್ನೂ ಬಲಿಪೀಠಗಳನ್ನೂ ಕೆಡವಿಹಾಕಿದರು. ಆಗ ಇಸ್ರಾಯೇಲ್‌ ಮಕ್ಕಳೆಲ್ಲರು ತಮ್ಮ ತಮ್ಮ ಸ್ವಾಸ್ತ್ಯಗ ಳಿಗೂ ತಮ್ಮ ತಮ್ಮ ಪಟ್ಟಣಗಳಿಗೂ ತಿರಿಗಿಹೋದರು.

2 Chronicles 31:1 (UKJV) Now when all this was finished, all Israel that were present went out to the cities of Judah, and brake the images in pieces, and cut down the groves, and threw down the high places and the altars out of all Judah and Benjamin, in Ephraim also and Manasseh, until they had utterly destroyed them all. Then all the children of Israel returned, every man to his possession, into their own cities.

1ಇದೆಲ್ಲಾ ತೀರಿದ ತರುವಾಯ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲ್ಯರು ಯೆಹೂ ದದ ಪಟ್ಟಣಗಳಿಗೆ ಹೊರಟು ಹೋಗಿ ವಿಗ್ರಹಗಳನ್ನು ಮುರಿದು ತೋಪುಗಳನ್ನು ಕಡಿದು ಸಮಸ್ತ ಯೆಹೂದ ಬೆನ್ಯಾವಿಾನ್‌ ಎಫ್ರಾಯಾಮ್‌ ಮನಸ್ಸೆ ದೇಶಗಳಲ್ಲಿ ಅವುಗಳನ್ನೆಲ್ಲಾ ತೀರಿಸುವ ಪರ್ಯಂತರ ಉನ್ನತ ಸ್ಥಳ ಗಳನ್ನೂ ಬಲಿಪೀಠಗಳನ್ನೂ ಕೆಡವಿಹಾಕಿದರು. ಆಗ ಇಸ್ರಾಯೇಲ್‌ ಮಕ್ಕಳೆಲ್ಲರು ತಮ್ಮ ತಮ್ಮ ಸ್ವಾಸ್ತ್ಯಗ ಳಿಗೂ ತಮ್ಮ ತಮ್ಮ ಪಟ್ಟಣಗಳಿಗೂ ತಿರಿಗಿಹೋದರು.

2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.

3ಅವನು ಕರ್ತನ ನ್ಯಾಯಪ್ರಮಾಣದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನ ಬಲಿಗಳಿಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಸ್ಥಿತಿಯಿಂದ ಅವನ ಭಾಗವನ್ನು ನೇಮಿಸಿದನು.

Kannada Bible (Old Version), Bible Society of India.