2 ಉತ್ತರಕಾಲವೃತ್ತಾಂತ 35

ಮೋಶೆಯ ಪುಸ್ತಕದಲ್ಲಿ ಬರೆಯ ಲ್ಪಟ್ಟ ಹಾಗೆ ಕರ್ತನಿಗೆ ಅರ್ಪಿಸುವದಕ್ಕೋಸ್ಕರ ಜನರಿಗೆ ಆಯಾ ಕುಟುಂಬಗಳ ಶಾಖೆಗಳ ಪ್ರಕಾರ ಕೊಡಲು ಅವರು ದಹನಬಲಿಗಳನ್ನು ಹಾಗೆ ಎತ್ತುಗಳನ್ನು ತೆಗೆದಿಟ್ಟರು.

2 Chronicles 35:12 (UKJV) And they removed the burnt offerings, that they might give according to the divisions of the families of the people, to offer unto the LORD, as it is written in the book of Moses. And so did they with the oxen.

10ಹೀಗೆಯೇ ಅರಸನ ಆಜ್ಞೆಯ ಪ್ರಕಾರ ಸೇವೆಯು ಸಿದ್ಧಮಾಡಲ್ಪಟ್ಟಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.

11ಲೇವಿಯರು ಪಸ್ಕದ ಕುರಿಯನ್ನು ವಧಿಸಿದ ತರು ವಾಯ ಯಾಜಕರು ಅವರ ಕೈಯಿಂದ ರಕ್ತವನ್ನು ತಕ್ಕೊಂಡು ಚಿಮುಕಿಸಿದರು; ಆದರೆ ಲೇವಿಯರು ಚರ್ಮ ವನ್ನು ಸುಲಿದರು;

12ಮೋಶೆಯ ಪುಸ್ತಕದಲ್ಲಿ ಬರೆಯ ಲ್ಪಟ್ಟ ಹಾಗೆ ಕರ್ತನಿಗೆ ಅರ್ಪಿಸುವದಕ್ಕೋಸ್ಕರ ಜನರಿಗೆ ಆಯಾ ಕುಟುಂಬಗಳ ಶಾಖೆಗಳ ಪ್ರಕಾರ ಕೊಡಲು ಅವರು ದಹನಬಲಿಗಳನ್ನು ಹಾಗೆ ಎತ್ತುಗಳನ್ನು ತೆಗೆದಿಟ್ಟರು.

13ಹೀಗೆ ಕಟ್ಟಳೆಯ ಪ್ರಕಾರ ಪಸ್ಕವನ್ನು ಬೆಂಕಿಯಿಂದ ಬೇಯಿಸಿದರು. ಆದರೆ ಪರಿಶುದ್ಧವಾದ ವುಗಳನ್ನು ಗಡಿಗೆಗಳಲ್ಲಿಯೂ ತಪ್ಪಲೆಗಳಲ್ಲಿಯೂ ಕೊಪ್ಪರಿಗೆಗಳಲ್ಲಿಯೂ ಬೇಯಿಸಿ ಶೀಘ್ರವಾಗಿ ಜನರೆ ಲ್ಲರಿಗೆ ಕಳುಹಿಸಿದರು.

14ತರುವಾಯ ತಮಗೋಸ್ಕ ರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಯಾಕಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನ ಬಲಿಗಳನ್ನೂ ಕೊಬ್ಬನ್ನೂ ಅರ್ಪಿಸುವದರಲ್ಲಿದ್ದರು. ಆದದರಿಂದ ಲೇವಿಯರು ತಮಗೋಸ್ಕರವೂ ಆರೋನನ ಮಕ್ಕಳಾದ ಯಾಜಕರಿ ಗೋಸ್ಕರವೂ ಸಿದ್ಧಮಾಡಿದರು.

Kannada Bible (Old Version), Bible Society of India.