8ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
9ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ ಅವನ ಸಹೋದರರಾದ ಶೆಮಾಯನೂ ನೆತನೇಲನೂ ಹಷಲ್ಯನೂ ಯೆಗೀಯೇಲನೂ ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಮರಿಗಳನ್ನೂ ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
10ಹೀಗೆಯೇ ಅರಸನ ಆಜ್ಞೆಯ ಪ್ರಕಾರ ಸೇವೆಯು ಸಿದ್ಧಮಾಡಲ್ಪಟ್ಟಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.
11ಲೇವಿಯರು ಪಸ್ಕದ ಕುರಿಯನ್ನು ವಧಿಸಿದ ತರು ವಾಯ ಯಾಜಕರು ಅವರ ಕೈಯಿಂದ ರಕ್ತವನ್ನು ತಕ್ಕೊಂಡು ಚಿಮುಕಿಸಿದರು; ಆದರೆ ಲೇವಿಯರು ಚರ್ಮ ವನ್ನು ಸುಲಿದರು;
12ಮೋಶೆಯ ಪುಸ್ತಕದಲ್ಲಿ ಬರೆಯ ಲ್ಪಟ್ಟ ಹಾಗೆ ಕರ್ತನಿಗೆ ಅರ್ಪಿಸುವದಕ್ಕೋಸ್ಕರ ಜನರಿಗೆ ಆಯಾ ಕುಟುಂಬಗಳ ಶಾಖೆಗಳ ಪ್ರಕಾರ ಕೊಡಲು ಅವರು ದಹನಬಲಿಗಳನ್ನು ಹಾಗೆ ಎತ್ತುಗಳನ್ನು ತೆಗೆದಿಟ್ಟರು.