2 ಉತ್ತರಕಾಲವೃತ್ತಾಂತ 6

ಈಗ ಇಸ್ರಾಯೇಲಿನ ದೇವ ರಾದ ಓ ಕರ್ತನೇ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನಿಶ್ಚಯವಾಗಲಿ.

2 Chronicles 6:17 (UKJV) Now then, O LORD God of Israel, let your word be verified, which you have spoken unto your servant David.

15ನೀನು ನಿನ್ನ ಸೇವಕನಾದಂಥ ನನ್ನ ತಂದೆಯಾದ ದಾವೀದನಿಗೋಸ್ಕರ ಕೊಟ್ಟ ಮಾತನ್ನು ನೆರವೇರಿಸಿ ನಿನ್ನ ಬಾಯಿಂದ ಹೇಳಿದ್ದನ್ನು ಇಂದು ನಿನ್ನ ಕೈಯಿಂದ ಮಾಡಿ ತೀರಿಸಿದಿ.

16ಆದಕಾರಣ ಇಸ್ರಾಯೇಲಿನ ದೇವರಾದ ಓ ಕರ್ತನೇ,--ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಹಾಗೆ ಅವರು ನನ್ನ ನ್ಯಾಯ ಪ್ರಮಾಣದ ಪ್ರಕಾರ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ಕುಳಿತುಕೊ ಳ್ಳಲು ನಿನಗೆ ಮನುಷ್ಯನು ಕೊರತೆಯಾಗುವದಿಲ್ಲವೆಂದು ನೀನು ನನ್ನ ತಂದೆಯೂ ನಿನ್ನ ಸೇವಕನೂ ದಾವೀದನಿಗೆ ಹೇಳಿದ್ದನ್ನು ನಡಿಸು.

17ಈಗ ಇಸ್ರಾಯೇಲಿನ ದೇವ ರಾದ ಓ ಕರ್ತನೇ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನಿಶ್ಚಯವಾಗಲಿ.

18ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾಕಾಶಗಳೂ ನಿನ್ನನ್ನು ಹಿಡಿಸಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಆಲಯವು ನಿನ್ನನ್ನು ಹಿಡಿಸುವದು ಹೇಗೆ?

19ನನ್ನ ದೇವರಾದ ಓ ಕರ್ತನೇ, ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ಮೊರೆಯನ್ನೂ ಕೇಳುವ ಹಾಗೆ ನಿನ್ನ ಸೇವಕನ ಪ್ರಾರ್ಥನೆಯನ್ನೂ ಅವನ ವಿಜ್ಞಾಪನೆಯನ್ನೂ ಕಟಾಕ್ಷಿಸು.

Kannada Bible (Old Version), Bible Society of India.