6ಆದರೆ ನನ್ನ ಹೆಸರು ಅಲ್ಲಿ ಇರುವ ಹಾಗೆ ಯೆರೂಸಲೇಮನ್ನೂ ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ಇರಲು ದಾವೀದನನ್ನೂ ಆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.
7ಆದಕಾರಣ ಇಸ್ರಾಯೇಲಿನ ದೇವರಾದ ಕರ್ತನ ಹೆಸರಿಗೆ ಆಲಯ ವನ್ನು ಕಟ್ಟಿಸಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು.
8ಆಗ ಕರ್ತನು ನನ್ನ ತಂದೆಯಾದ ದಾವೀ ದನಿಗೆ--ನನ್ನ ಹೆಸರಿಗೆ ಆಲಯವನ್ನು ಕಟ್ಟಿಸಲು ನಿನಗೆ ಮನಸ್ಸಾಗಿತ್ತಲ್ಲಾ? ನಿನಗೆ ಮನಸ್ಸಾಗಿರುವದರಿಂದ ಒಳ್ಳೇದು ಮಾಡಿದಿ.
9ಆದರೆ ನೀನು ಆಲಯವನ್ನು ಕಟ್ಟಿಸಬೇಡ; ನಿನ್ನಿಂದ ಹುಟ್ಟುವ ಮಗನೇ ನನ್ನ ಹೆಸರಿ ಗೋಸ್ಕರ ಆಲಯವನ್ನು ಕಟ್ಟಿಸುವನು ಅಂದನು.
10ಈಗ ಕರ್ತನು ತಾನು ಹೇಳಿದ ವಾಕ್ಯವನ್ನು ನೆರ ವೇರಿಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ಹೆಸರಿಗೆ ಆಲಯ ವನ್ನು ಕಟ್ಟಿಸಿ