10ಇದಲ್ಲದೆ ಓಫೀರಿನಿಂದ ಬಂಗಾರವನ್ನು ತಂದ ಹೂರಾಮನ ಸೇವಕರೂ ಸೊಲೊಮೋನನ ಸೇವ ಕರೂ ಅಲ್ಮಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗ ಳನ್ನೂ ತಂದರು.
11ಅರಸನು ಆ ಸುಗಂಧ ಮರಗಳಿಂದ ಕರ್ತನ ಆಲಯಕ್ಕೋಸ್ಕರ ಅರಸನ ಮನೆಗೋಸ್ಕರವೂ ಸೋಪಾನಗಳನ್ನೂ ಹಾಡುವವರಿಗೋಸ್ಕರ ಕಿನ್ನರಿಗ ಳನ್ನೂ ವೀಣೆಗಳನ್ನೂ ಮಾಡಿಸಿದನು; ಯೆಹೂದ ದೇಶದಲ್ಲಿ ಅದಕ್ಕಿಂತ ಮುಂಚೆ ಅಂಥವುಗಳು ಕಾಣಲಿಲ್ಲ.
12ಶೆಬದ ರಾಣಿಯು ಅರಸನಿಗೆ ತಂದದ್ದಕ್ಕೆ ಬದ ಲಾಗಿ ಅರಸನಾದ ಸೊಲೊಮೋನನು ಕೊಟ್ಟದ್ದು ಹೊರತಾಗಿ ಅವಳು ಇಚ್ಛಿಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಆಗ ಅವಳು ತಿರಿಗಿಕೊಂಡು ತನ್ನ ದೇಶಕ್ಕೆ ಹೋದಳು; ಅವಳೂ ಅವಳ ಸೇವಕರೂ ಕೂಡ ಹೋದರು.
13ಆದರೆ ವರ್ತಕರೂ ವ್ಯಾಪಾರಸ್ಥರೂ ತಂದದ್ದು ಹೊರತಾಗಿ ಒಂದು ವರುಷದಲ್ಲಿ ಸೊಲೊಮೋನನಿಗೆ ಬಂದ ಬಂಗಾರದ ತೂಕವು ಆರುನೂರ ಅರವತ್ತಾರು ತಲಾಂತು ತೂಕ ಬಂಗಾರವಾಗಿತ್ತು.
14ಇದಲ್ಲದೆ ಅರಬಸ್ಥಾನದ ಅರಸುಗಳೂ ದೇಶದ ಅಧಿಪತಿಗಳೂ ಸೊಲೊಮೋನನಿಗೆ ಬೆಳ್ಳಿಬಂಗಾರವನ್ನು ತಂದರು.