9ಅವಳು ಅರಸನಿಗೆ ನೂರಿಪ್ಪತ್ತು ತಲಾಂತು ತೂಕ ಬಂಗಾರವನ್ನೂ ಬಹು ಹೆಚ್ಚಾದ ಸುಗಂಧಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಂಥ ಸುಂಗಧಗಳು ತರುವಾಯ ಬಂದದ್ದಿಲ್ಲ.
10ಇದಲ್ಲದೆ ಓಫೀರಿನಿಂದ ಬಂಗಾರವನ್ನು ತಂದ ಹೂರಾಮನ ಸೇವಕರೂ ಸೊಲೊಮೋನನ ಸೇವ ಕರೂ ಅಲ್ಮಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗ ಳನ್ನೂ ತಂದರು.
11ಅರಸನು ಆ ಸುಗಂಧ ಮರಗಳಿಂದ ಕರ್ತನ ಆಲಯಕ್ಕೋಸ್ಕರ ಅರಸನ ಮನೆಗೋಸ್ಕರವೂ ಸೋಪಾನಗಳನ್ನೂ ಹಾಡುವವರಿಗೋಸ್ಕರ ಕಿನ್ನರಿಗ ಳನ್ನೂ ವೀಣೆಗಳನ್ನೂ ಮಾಡಿಸಿದನು; ಯೆಹೂದ ದೇಶದಲ್ಲಿ ಅದಕ್ಕಿಂತ ಮುಂಚೆ ಅಂಥವುಗಳು ಕಾಣಲಿಲ್ಲ.
12ಶೆಬದ ರಾಣಿಯು ಅರಸನಿಗೆ ತಂದದ್ದಕ್ಕೆ ಬದ ಲಾಗಿ ಅರಸನಾದ ಸೊಲೊಮೋನನು ಕೊಟ್ಟದ್ದು ಹೊರತಾಗಿ ಅವಳು ಇಚ್ಛಿಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಆಗ ಅವಳು ತಿರಿಗಿಕೊಂಡು ತನ್ನ ದೇಶಕ್ಕೆ ಹೋದಳು; ಅವಳೂ ಅವಳ ಸೇವಕರೂ ಕೂಡ ಹೋದರು.
13ಆದರೆ ವರ್ತಕರೂ ವ್ಯಾಪಾರಸ್ಥರೂ ತಂದದ್ದು ಹೊರತಾಗಿ ಒಂದು ವರುಷದಲ್ಲಿ ಸೊಲೊಮೋನನಿಗೆ ಬಂದ ಬಂಗಾರದ ತೂಕವು ಆರುನೂರ ಅರವತ್ತಾರು ತಲಾಂತು ತೂಕ ಬಂಗಾರವಾಗಿತ್ತು.