28ಇನ್ನೂ ಬೇರೆ ಹೊರಗಿನವುಗಳಲ್ಲದೆ ಎಲ್ಲಾ ಸಭೆಗಳ ವಿಷಯವಾದ ಚಿಂತೆಯನ್ನು ಪ್ರತಿ ದಿನವೂ ನಾನು ಹೊರುತ್ತಿದ್ದೇನೆ.
29ಯಾರಾದರೂ ಬಲವಿಲ್ಲದವನಾದರೆ ನಾನು ಬಲವಿಲ್ಲದವನಾಗದೆ ಇರುವೆನೋ? ಯಾರಾದರೂ ಮುಗ್ಗರಿಸಿದರೆ ನಾನು ತಾಪಪಡದೆ ಇರುವೆನೋ?
30ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು.
31ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು.
32ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.