5ಅದಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು ತಾನೇ ನಮಗೆ ಆತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.
6ಹೀಗಿರುವದರಿಂದ ಶರೀರದ ಮನೆಯಲ್ಲಿರುವ ವರೆಗೂ ನಾವು ಕರ್ತನಿಗೆ ದೂರವಾಗಿದ್ದೇವೆಂದು ಬಲ್ಲವರಾಗಿ ನಾವು ಯಾವಾಗಲೂ ಭರವಸವುಳ್ಳವ ರಾಗಿದ್ದೇವೆ;
7(ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ).
8ನಾವು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವದು ಉತ್ತಮವೆಂದು ಆಶಿಸಿ ಭರವಸವುಳ್ಳವರಾಗಿದ್ದೇವೆ.
9ಆದದರಿಂದ ನಾವು (ದೇಹವೆಂಬ ಮನೆಯಲ್ಲಿದ್ದರೂ ಸರಿಯೇ) ಅದನ್ನು ಬಿಟ್ಟಿ ದ್ದರೂ ಸರಿಯೇ, ಆತನನ್ನು ಮೆಚ್ಚಿಸುವವರಾಗಿರಬೇಕೆಂದು ನಾವು ಪ್ರಯಾಸ ಪಡುತ್ತೇವೆ.